ವಯಸ್ಸು ೭
ನಮ್ಮ ಈ ಕಲಾಪ್ರಕಾರದ ತರಬೇತಿ ಸಾಧಾರಣವಾಗಿ ಏಳನೇ ವಯಸ್ಸಿನಿಂದ ತೊಡಗುತ್ತದೆ. ಈ ಪ್ರಾಯದಲ್ಲಿ ಮಗುವು ಸ್ವಯಂ ಆಸಕ್ತಿಯಿಂದ ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಕೊಂಡಿರುವುದನ್ನು ಗಮನಿಸಿ, ಯಾವ ಕಡೆಗೆ ಅವನ ಆಸಕ್ತಿ ಅಥವಾ ಅವನ ಪ್ರತಿಭೆ ಹೆಚ್ಚು ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಅವನ ಆ ಒಲವಿನತ್ತ, ಸ್ವಭಾವಿಕ ಆಸಕ್ತಿಯತ್ತ ಅವನನ್ನು ಹಿಂಬಾಸಲು ಬಿಡಬೇಕು. ಅದು ಹಾಡುಗಾರಿಕೆ ಇರಬಹುದು, ಕುಣಿತದ ಕಡೆಗೆ ಇರಬಹುದು, ಅಥವಾ ಬರಿದೇ ಕೈಕಾಲು ಬಡಿಯುವ ಗುದ್ದಾಡುವ ಕಡೆಗಿರಬಹುದು. ಅಥವಾ ತನ್ನಲ್ಲಿರುವ ಕಚ್ಚಾ ಚೈತನ್ಯವನ್ನು ಹೇಗೋ ಅಭಿವೆಕ್ತಿಸುವ ರೀತಿ ಇರಬಹುದು. ಅವನಿಗೆ ಆ ಸ್ವಾತಂತ್ರ್ಯವನ್ನು ಬಿಟ್ಟುಬಿಡಬೇಕು. ಯಾವುದು ಸರಿ ಅಥವಾ ಯಾವುದು ತಪ್ಪು, ಅಥವಾ ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಎಂಬುದನ್ನು ಅವನಿಗೆ ನೀವು ಈ ಕೂಡಲೇ ತಿಳಿಹೇಳುವ ಪ್ರಯತ್ನವನ್ನು ಮಾಡಬಾರದು. ಏಕೆಂದರೆ ಆ ಹುಡುಗನಲ್ಲಿರುವ ಪ್ರದರ್ಶನದತ್ತದ ಕುತೂಹಲ ಕಡಿಮೆಯಾಗಿ ಅವನು ಬಸವಳಿದು ಯಾವ ಬೆಳವಣಿಗೆಯನ್ನು ಮಾಡಲಾಗದೆ ಹೋಗಬಹುದು. ಇಷ್ಟಾಗಿಯೂ ಹಾಡು, ಕುಣಿತ ಮತ್ತು ಚಲನೆಗಳ ಕುರಿತಾದ ನಿರ್ಧಿಷ್ಟ ಅಭ್ಯಾಸ ಮಾಡುವಂತೆ ಉತ್ತೇಜಿಸಬೇಕು. ಅವನು ಪ್ರದರ್ಶನಕ್ಕೆ ಸಂಬಂದಪಟ್ಟ ಅನುಕರಣೆಗಳನ್ನು ಮಾಡಲು ಯೋಗ್ಯನಾದರೂ ಮಾಡಲು ಯೋಗ್ಯನಾಗಿದ್ದರೂ ಅಂತಹ ಯಾವುದೇ ತಂತ್ರಗಳನ್ನು ವಿವರವಾಗಿ ಹೇಳಿಕೊಡಬಾರದು. ಅಥವಾ ಯಾವುದೇ ಪ್ರದರ್ಶನದಲ್ಲಿ ಅವನಿಗೆ ಪಾತ್ರವಹಿಸಲು ಅನುಮತಿಸಬಾರದು. ಅಭ್ಯಾಸದ ಮೂರನೆಯ ಅಥವಾ ನಾಲ್ಕನೆಯ ಹಂತದಲ್ಲಿ ಪ್ರದರ್ಶನಗಳ ಕಡೆಗೆ ಅವರನ್ನು ಉತ್ತೇಜಿಸಬಹುದು.
ಹನ್ನೆರಡು ಅಥವಾ ಹದಿಮೂರನೆಯ ವಯಸ್ಸಿನ ಅಭ್ಯಾಸಗಳು
ಈ ಹೊತ್ತಿಗೆ ಮಗುವು ಒಂದು ಸಂಪೂರ್ಣ ಮಟ್ಟನ್ನು ನೆನಪಿನಲ್ಲಿಟ್ಟು ಅಭ್ಯಾಸ ಮಾಡುವ ಹಂತಕ್ಕೆ ಬಂದಿರುತ್ತಾನೆ. ಮತ್ತು ಪ್ರದರ್ಶನದ ಬಗೆಗೆ ಒಂದು ನೆಲೆಯ ಸಂಗತಿಗಳನ್ನಾದರೂ ಅರ್ಥಮಾಡಿಕೊಳ್ಳುವ ಹಾಗಾಗಿರುತ್ತಾನೆ. ಹಾಗಾಗಿ ಈ ವಯಸ್ಸಿನಲ್ಲಿ ಅವನಿಗೆ ಬೇರೆ ಬೇರೆ ರೀತಿಯ ಪಾತ್ರಗಳ ಬಗ್ಗೆ ಹೇಳಿಕೊಡಲು ಆರಂಭಿಸಬೇಕು. ಮೊದಲನೆಯದಾಗಿ ಅವನಿನ್ನೂ ಬಾಲಕನಗಿರುವುದರಿಂದ ಅವನೇನೇ ಮಾಡಿದರೂ ಅಲ್ಲೊಂದು ಸೆಳೆತದ ಗುಣವಿರುತ್ತದೆ. ಇನ್ನೂ ಹೆಚ್ಚಾಗಿ ಅಲ್ಲಿ ಅವನ ಬಾಲ್ಯದ ಧ್ವನಿ, ಅದರ ಉತ್ತಮ ಲಕ್ಷಣಗಳನ್ನೆಲ್ಲ ತೋರಿಸುತ್ತಿರುತ್ತದೆ. ಈ ಎರಡು ವೈಷಿಶ್ಟ್ಯಗಳಿಂದ ಅವನಲ್ಲಿನ ಕೆಟ್ಟ ಅಂಶಗಳು ಮರೆಯಾಗಿ ಒಳ್ಳೆಯ ಅಂಶಗಳು ಅರಳತೊಡಗುತ್ತದೆ. ಈ ವಯಸ್ಸಿನಲ್ಲಿ ವಿದ್ಯಾರ್ಥಿಗೆ ನಾಟಕೀಯ ಅನುಕರಣೆಗಳನ್ನು ತುಂಬ ಸಲ ಮಾಡಲು ಬಿಡಬಾರದು. ಅದು ಚೆನ್ನಾಗಿಯೂ ಕಾಣಿಸುವುದಿಲ್ಲ. ಅಲ್ಲದೆ ವಿದ್ಯಾರ್ಥಿಯ ಸಾಮರ್ಥ್ಯವನ್ನೂ ಹೆಚ್ಚಿಸುವುದಿಲ್ಲ. ಅಲ್ಲದೆ ಅವನು ನಿಜವಾದ ಸಾಮರ್ಥ್ಯವನ್ನು ತೋರಿಸುವಂತಾದಾಗ ಅವನಿಗೆ ಏನನ್ನೂ ತೋರಿಸಲು ಅನುಮತಿ ನೀಡಬಹದು. ಅಲ್ಲದೆ ಉತ್ತಮ ಧ್ವನಿಯಿರುವ ಪ್ರತಿಭಾನ್ವಿತನಾದ ಚಂದದ ಏಳೆಯ ಹುಡುಗ ತಪ್ಪಾಗಿ ಕಾಣುವುದು ಅತಿ ವಿರಳ. ಹೀಗಿದ್ದರೂ ಈಗ ನಾವು ಕಾಣುತ್ತಿರುವ "ಪುಷ್ಪ" ನಿಜವಾದ ಪುಷ್ಪವಲ್ಲ. ಇದು ಕೇವಲ ಆ ಕಾಲದ ಕ್ಷಣಿಕ ಪುಷ್ಪವಷ್ಟೆ. ಹಾಗಾಗಿ ಈ ಸಮಯದಲ್ಲಿನ ತರಬೇತಿ, ಅಬ್ಯಾಸ ಯಾವತ್ತೂ ಸೂಕ್ಷ್ಮವಾಗಿರಬೇಕು, ಮೃದುವಾಗಿರಬೇಕು. ಹಾಗಾಗಿ ಇದು ಆ ವಿದ್ಯಾರ್ಥಿಯ ಇಡೀ ಜೀವಮಾನಕಾಲದ ಸಾದ್ಯತೆಗಳ ಖಚಿತವಾದ ನಿರೂಪಣೆಯೇನಲ್ಲ. ಈ ಹಂತದಲ್ಲಿ ಯಾವಯಾವ ಅಂಶಗಳನ್ನು ವಿದ್ಯಾಥಿಯು ಸುಲಭವಾಗಿ ಮಾಡಬಲ್ಲನೋ ಅವುಗಳನ್ನು ಪ್ರದರ್ಶನದ ಪುಷ್ಪವನ್ನಾಗಿ ಮಾಡಬೇಕು. ಮತ್ತು ಗಮನದ ಕೇಂದ್ರ ಅವನಿಗೆ ಸಾದ್ಯವಾಗುವ ತಂತ್ರಗಳ ಮೇಲಿರಬೇಕು. ಅವನ ಚಲನೆಗಳು ನಿರ್ದಿಷ್ಟವಾಗಿರಬೇಕು, ಹಾಡುಗಾರಿಕೆ ಮನದಟ್ಟಾಗುವಂತಿರಬೇಕು. ಶಬ್ದ,ಶಬ್ಧ ಸಹ ಅರ್ಥವಾಗುವಂತಿರಬೇಕು. ಅವನ ಕುಣಿತ, ನೃತ್ಯದ ಭಾಗಗಳಲ್ಲಿನ ಮುದ್ರೆಗಳು, ಜಶ್ಚರ್‌ಗಳು ನಿಖರವಾಗಿ ನಿರ್ದೇಶಿಸಲ್ಪಟ್ಟಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವನ ತಾಲೀಮಿನ ಕಡೆಗೆ ಆಳವಾದ ಕಾಳಜಿ ಕೊಡಬೇಕು.
ಈ ವಯಸ್ಸಿನ ಹಂತ ತುಂಭಾ ಮುಖ್ಯವಾದದ್ದು. ಈ ಹಂತದಲ್ಲಿ ಅತಿಯಾದ ತಾಲೀಮು ಮಾಡಬಾರದು. ಮಾಡದಿದ್ದರೆ ಒಳಿತು. ಮೊದಲನೆಯದಾಗಿ ಈ ವಯಸ್ಸಿನಲ್ಲಿ ನಿಮ್ಮ ಧ್ವನಿ ಬದಲಾಗುತ್ತಿರುವುದರಿಂದ ಪ್ರರ್ದಶನ ಕಲೆಯ ಒಂದು ಅಸ್ತ್ರವನ್ನು ನೀವು ಕಳೆದು ಕೊಳ್ಳುತ್ತೀರಿ. ಕೈಕಾಲುಗಳಲ್ಲಿನ ಬೆಳವಣಿಗೆ ಅಳತೆ ತಪ್ಪಿದ ಹಾಗೆ ಆಗುವುದರಿಂದ ದೈಹಿಕವಾದ ಸೆಳೆತವನ್ನೂ ಕಳೆದು ಕೊಳ್ಳೂತ್ತೀರಿ. ಹಾಗೆ ಈ ಕಾಲಘಟ್ಟದಲ್ಲಿ ಸುಂದರ ಧ್ವನಿಯೊಂದಿಗೆ ಶ್ರಮವಿಲ್ಲದ ಉತ್ಸಾಹದಿಂದ ಪ್ರದರ್ಶಿಸುತ್ತಿದ್ದ ಈ ಎರಡು ಅಂಶಗಳು ಬದಲಾಗುತ್ತಿದ್ದ ಹಾಗೆ ಪ್ರದರ್ಶನದ ನಿಮ್ಮ ಎಣಿಕೆಗಳೆಲ್ಲ ಏರುಪೇರಾಗಿ ನೀವು ಸೋತಂತೆ ನಿಮಗನ್ನಿಸುತ್ತದೆ. ಇದಕ್ಕೂ ಮಿಗಿಲಾಗಿ ನೋಡುಗರು ನಿಮ್ಮನ್ನು ಹಾಸ್ಯಾಸ್ಪದವಾಗಿ ಕಾಣತೊಡಗುತ್ತಾರೆ. ಹಾಗಾಗಿ ಒಂದಿಲ್ಲೊಂದು ಸಂದರ್ಭಗಳು ನಾಚಿಕೆಗಿಟ್ಟು, ಮುಖಗೇಡಿಮಾಡಿ ಎದೆಗುಂದುವಂತೆ ಮಾಡಬಹುದು. ಈ ಅವಧಿಯ ತಾಲೀಮಮಿನಲ್ಲಿ ಜನ ನಿಮಗೆ ಬೊಟ್ಟುಮಾಡಿ ನಗೆಯಾಡಿದರೂ ಅವರ ಕಡೆಗೆ ನಿಮ್ಮ ತಲೆ ಕೆಡಿಸಿಕೊಳ್ಳಬೇಡಿ. ಬದಲಿಗೆ ಆದಷ್ಟೂ ಒಬ್ಬರೇ ಅಭ್ಯಾಸ ಮಾಡಿ. ನಿಮ್ಮ ಧ್ವನಿ ಸುಲಲಿತವಾಗಿ ಏರಿಳಿಯುವ ಸ್ಥಾಯಿಯನ್ನು ಕಂಡುಕೊಂಡು ಅಲ್ಲಿ ಕಠಿಣವಾಗಿ ಅಬ್ಯಾಸಮಾಡಿ.ಮುಂಜಾನೆಗೆ ಮತ್ತು ಮುಸ್ಸಂಜೆಗೆ ಸರಿಯಾಗಿ ನಿಮ್ಮ ಧ್ವನಿಯ ಅಭ್ಯಾಸದಲ್ಲಿ ಬದಲಾವಣೆಗಳನ್ನನು ಮಾಡಿಕೊಳ್ಳಿ. ಈ ಕಾಲಘಟ್ಟ ಬದುಕಿನ ಮುಖ್ಯ ತಿರುವುಗಳಲ್ಲಿ ಒಂದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಇಡೀ ಜೀವಮಾನದುದ್ದಕ್ಕೂ ಈ ಪ್ರದರ್ಶನ ಕಲೆಯ ಕಡೆಗೆ ಸಂಪೂರ್ಣ ಭಕ್ತಿಯಿಂದ ನಿಮ್ಮನ್ನು ಬದ್ಧರಾಗಿಸಿಕೊಳ್ಳಿ. ಬೇರೆ ಯಾವುದೇ ರೀತಿಯ ತರಬೇತಿ ನಿಮಗೆ ಲಭ್ಯವಿಲ್ಲ. ಈ ವಯಸ್ಸಿನಲ್ಲಿ ನೀವು ಎದೆಗುಂದಿ ಬಿಟ್ಟುಕೊಟ್ಟರೆ ಅಲ್ಲಿಗೇ ನಿಮ್ಮ ಕೆಲಸ ಮುಗಿಯುವುದು ಖಂಡಿತ. ಧ್ವನಿಯ ಸ್ತಾಯಿ ಪ್ರತಿಯೊಬ್ಬನ ಧ್ವನಿಗೆ ಬೇರೆ ಬೇರೆಯಾಗಿರುವುದು ನಿಜವಾದರೂ ನೀವು ಓಶೀಕಿ ಅಥವಾ ಬನ್ಶಿಕಿ ಸ್ತಾಯಿಗಳನ್ನು ಬಳಸುವುದು ಒಳ್ಳೇದು. ನೀವು ಒಂದೇ ಸ್ತಾಯಿ ಅಥವಾ ಪಿಚ್ ನ ಬಗ್ಗೆ ಒಲವಿಟ್ಟುಕೊಂಡರೆ ಕೆಲವೊಮ್ಮೆ ಅದು ನಿಮ್ಮ ದೇಹದ ಆಕಾರವನ್ನೂ ಬದಲಾಯಿಸಿ ತೊಂದರೆಗೀಡು ಮಾಡಬಹುದು. ಅಥವಾ ವಯಸ್ಸಾದ ಮೇಲೆ ನಿಮ್ಮ ಧ್ವನಿಯಲ್ಲಿ ಅದು ತೊಂದರೆ ಉಂಟು ಮಾಡಬಹುದು.
ಮುಂದುವರೆಯುವುದು...
ಅನುವಾದ - ಶ್ರೀಧರ ಹೆಗ್ಗೋಡು
ಅನುವಾದ - ಶ್ರೀಧರ ಹೆಗ್ಗೋಡು


No comments:
Post a Comment