Sunday, December 31, 2017

ಹೊಸ ವರುಷ

ಹೊಸ ವರುಷಕೆ ಹೊಸದಾಗಿ ಹೇಗೆ ಹೊಸೆಯಲಿ ಪ್ರಾಸ,
ಸಾವಿರ ವರುಷಗಳಿಂದ ಹೆಣೆಯಯತ್ತಲೆ ಬಂದಿಲ್ಲವೆ?

ಹೊಸ ವರುಷ ಬಂದಂತೆ ಹಳೆಯದು ಹೋಗುವುದು,
ಪ್ರತಿ ಸಲದಂತೆ ಹೊಸ ಕನಸ ಕಾಣುವುದು....

ಇದು ಅಭ್ಯಾಸ!

ಜಗತ್ತನ್ನು ತಬ್ಬುತ್ತೇವೆ ಅದು ನಮ್ಮ ಕನಸ ಗುಳ್ಳೆಯನ್ನು ಚುಚ್ಚಿ ಒಡೆಯುವವರೆಗೂ,
ಮತ್ತೆ ಹಿಡಿ ಶಾಪ ಹಾಕಿ, ಹೊಸ ಕನಸಿಗೆ ರೆಕ್ಕೆ ಕಟ್ಟುತ್ತೆವೆ, ಉಸಿರ ಗಟ್ಟಿ ಹಿಡಿದು,

ಇದೂ ಅಭ್ಯಾಸ ಆದದ್ದೇ!

ಮತ್ತೆ ಬದುಕ ಸವಿಯುತ್ತ, ಬಯಸುತ್ತ, ನಗುತ್ತ, ನಗಿಸುತ್ತ, ಮದುವಣಿಗರ ಸಿಂಗರಿಸುತ್ತಾ,
ಹಿರಿಯರ, ಕಿರಿಯರ ತಟ್ಟನೆ ಕಳೆದುಕೊಳ್ಳುತ್ತಾ,

ನಾವು ನಗುತ್ತಾ, ಹೊಸ ಬರವಸೆಯ ತಳೆಯುತ್ತಾ ಹೊಸ ವರುಷವ ಎದುರುಗೊಳ್ಳುತ್ತೇವೆ,
ಹಳೆ ವರುಷಗಳ ಭಾರ ಇನ್ನೂ ನಮ್ಮ ಹೆಗಲಮೇಲೆ ಇಟ್ಟುಕೊಂಡೇ...