ಹಿಮಸ್ವಚ್ಚ ಬಿಳಿ ಹಾಳೆ ಹೇಳಿತು
ನಾನೋ ಜನ್ಮಶುದ್ಧೆ
ಶುಭ್ರವಾಗಿಯೇ ಉಳಿಯುವೆ ಎಂದೆಂದಿಗೂ
ಕಪ್ಪಿನ ಕಲೆಯಿಂದ ಬದುಕುಳಿಯಲು
ಅಗ್ನಿ ಪ್ರವೇಷಕ್ಕೂ ಸಿದ್ದೆ.
ಆಗಲೂ ಸುಟ್ಟು ಬಿಳಿ ಬೂದಿಯಾಗಿಯೇ ಉಳಿವೆ.
ಶಾಯಿಯ ಬುರುಡೆ ಇದ ಕೇಳಿತು ಮತ್ತು
ನಗೆಯಾಡಿತು ತನ್ನ ಕರಿ ಹೃದಯದಲ್ಲಿ.
ಆದರೆ ಬಿಳಿ ಹಾಳೆಯ ಬಳಿಸಾರಲಿಲ್ಲ.
ಬಣ್ಣದ ಬೆಡಗಿನ ಪೆನ್ಸಿಲ್ಲು ಹಾಳೆಯ
ಮಾತಕೇಳಿತು ಆದರೆ ಬಳಿ ಹೋಗಲಿಲ್ಲ.
ಬಿಳಿ ಹಾಳೆ ಹಾಗೇ ಉಳಿಯಿತು ಶುಭ್ರ, ಸ್ವಚ್ಚವಾಗಿ
ಏನೂ ಬರೆಯದೆ ಖಾಲಿಯಾಗಿ.
ಖಲೀಲ್ ಗಿಬ್ರಾನ್
ಅನುವಾದ ದಿಗ್ವಿಜಯ .
ಅನುವಾದ ದಿಗ್ವಿಜಯ .
No comments:
Post a Comment