Friday, December 13, 2013

ಮೋಹನ ಮುರಳಿ



ಕವಿ ಶ್ರೀ ಎಮ್ ಗೋಪಾಲ ಕೃಷ್ಣ ಅಡಿಗರ ಸುಪರಿಚಿತ "ಮೋಹನ ಮುರಳಿ" ಪದ್ಯವನ್ನು ಹೊಸರೀತಿಯಲ್ಲಿ ಹಾಡಲು ಪ್ರಯತ್ನಿಸಿದ್ದೇವೆ. ಪದ್ಯದ ಅರ್ಥ, ಭಾವ ಮತ್ತು ಧ್ವನಿಯನ್ನು ಸಂಯೋಜನೆಯಲ್ಲಿ ಹೇಗೆ ಕನ್ನಡಿಸಬಹುದು ಎಂಬ ಹೊಸದೊಂದು ಪ್ರಯತ್ನ.

ಕೇಳಿ, ಹಂಚಿಕೊಳ್ಳಿ, ಅಭಿಪ್ರಾಯ ತಿಳಿಸಿ.

ಸಂಯೋಜನೆ: ಶ್ರೀಧರ ಹೆಗ್ಗೋಡು
ನಿರ್ವಹಣೆ: ದಿಗ್ವಿಜಯ ಹೆಗ್ಗೋಡು
ಧ್ವನಿ: ರವಿಕಿರಣ ಮಣಿಪಾಲ, ಶ್ರೀಧರ ಹೆಗ್ಗೋಡು
ಕಲಾವಿದೆ ವನಿತಾ ಯಾಜಿ ಈ ಸಂಯೋಜನೆಗಾಗಿಯೇ ರಚಿಸಿಕೊಟ್ಟ ಚಿತ್ರಗಳನ್ನು ಈ ವೀಡಿಯೋದಲ್ಲಿ ಬಳಸಲಾಗಿದೆ.







ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ  ಬಿಸಿದು ಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೋ ಅಡಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?




There is an English translation of the poem by Shri Sumatindra Nadiga.




4 comments:

  1. Sridhar/digvijay
    I was not expected you will upload so fast. It is our luck it is acting as a boosting dosage. I really appreciate because you have given English translation also, which is helpful to understand the poem in all manner.The sign of expectation , search is established in your composition ,voice is fully supportive for padyada AAshayakke.

    ReplyDelete
  2. Exllnt sir.. ತುಂಬಾ ಚೆನ್ನಾಗಿದೆ. ಅಭಿನಂದನೆ, ಶುಭಾಶಯ.

    ReplyDelete
  3. ನಿನಗೆ ನೀನೆ ಮತ್ತು ಇದು ಹೊಸತಾಗಿ ಮತ್ತೊಮ್ಮೆ ಓದಿಸಿದಿರಿ ಸರ್

    ReplyDelete