Saturday, June 12, 2021

ನಟ ಮತ್ತು ಪ್ರೇಕ್ಷಕ

ಪಾತ್ರದೊಳಗೆ ನಾ ಜಾರಿದ ಆ ಕ್ಷಣ

ಪ್ರೇಕ್ಷಾಂಗಣವೆಲ್ಲ ಒಮ್ಮೆಲೆ ನಿಶಬ್ಧ !
ನನ್ನ ಕಣ್ಣುಗಳು ಆ ಅಸ್ಪಷ್ಟ ಮುಖಗಳನ್ನ ಹುಡುಕುತ್ತಾ
ತಂಗಲು ತಕ್ಕ ಕಣ್ಣುಗಳು ಸಿಕ್ಕರೆ ಉಸಿರೂ ಸ್ತಬ್ಧ!

ಕ್ಷಣ ಇಬ್ಬರೂ ಜಗದ ಎಲ್ಲವನ್ನೂ ಆಡಿಕೊಂಡಂತೆ
ನನ್ನ ಮಾತಿಗೆ ಕಾದು ಹಸಿದವರಂತೆ
ಅಂದದ್ದನ್ನು ಅರಗಿಸಿಕೊಂಡಂತೆ
ಇಬ್ಬರೂ ಕಸಿವಿಸಿಗೊಳ್ಳುತ್ತಾ ಪುಳಕಗೊಳ್ಳುತ್ತೇವೆ.

ಈ ಕ್ಷಣಗಳಿಗೆ ಪಟ್ಟ ಪಾಡೆಲ್ಲವೂ ನೆನಪಾಗಿ
ಮೈಯ್ಯೆಲ್ಲ ನಡುಕ,
ಜೊತೆಯಲ್ಲೆ ಗಾಳಿಹೊಕ್ಕಿದ ಮರಿಯಂತೆ ಮನಸ್ಸು
ಥಕ್ಕತೈ ಕುಣಿತ.


- ವಿಜಯ

ಪೋಟೋ ಕೃಪೆ  ಅಪೂರ್ವಾನಂದ. 

No comments:

Post a Comment