1.
ಮರಗಳೋ ಆಗಸದ ಮೇಲೆ ಬರೆದಿಟ್ಟ
ಭುವಿಯ ಕವಿತೆಗಳು
ನಾವೋ ಅದನೆ ಕಡಿದು ಹಾಳೆಯ ಮಾಡಿ
ಬರೆಯುವೆವು ಮನುಕುಲದ ಖಾಲಿ ಖೊಟ್ಟಿಯನ್ನು.
2.
ಕಣ್ಣುಮುಚ್ಚಾಲೆ ಆಡೋಣ ಬಾ.
ನೀ ನನ್ನ ಹೃದಯದೊಳಗೆ ಅಡಗಿದರೆ
ಹುಡುಕುವುದು ಸುಲಭ.
ನಿನ್ನ ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡರೆ
ಹುಡುಕುವುದು ಬರಿದೆ ಸಮಯ ಹಾಳು.
3.
ನರಿಯೊಂದು ಮುಂಜಾವಿನಲಿ ತನ್ನ ನೆರಳನೇ ಕಂಡು
"ಇಂದು ಊಟಕೆ ಒಂಟೆಯಾದೀತು" ಎಂದುಕೊಂಡು
ಒಂಟೆಗಳ ಅರಸತೊಡಗಿತು.
ಮದ್ಯಾಹ್ನವಾದದ್ದೇ ಮತ್ತೆ ತನ್ನ ನೆರಳನೋಡಿ
"ಇಲಿಯೂ ಆದೀತು" ಎಂದಿತು!
ಅನುವಾದ -ದಿಗ್ವಿಜಯ
ಖಲೀಲ್ ಗಿಬ್ರಾನ್
ಖಲೀಲ್ ಗಿಬ್ರಾನ್
No comments:
Post a Comment