Sunday, December 2, 2012

ಮಂದಿರದ ಮೆಟ್ಟಿಲ ಮೇಲೆ...



ನೆನ್ನೆ ಸಂಜೆ ಮಂದಿರದ ಮೆಟ್ಟಿಲ ಮೇಲೆ
ಹೆಂಗಸೊಬ್ಬಳು ಇಬ್ಬರು ಗಂಡಸರ ನಡುವೆ ಕುಳಿತಿದ್ದ ಕಂಡೆ
ಅವಳ ಮುಖದ ಒಂದರ್ಧ ಬಿಳುಚಿತ್ತು, ಉಳಿದರ್ಧ ರಂಗೇರಿತ್ತು.





ಬಿತ್ತೊಂದ ಬಿತ್ತಿದರೆ ಭೂತಾಯ ಒಡಲಿಗೆ
ಹೂವ ನೀಡುವಳವಳು ಬದಲಿಗೆ
ಕನಸ ಕಂಡರೆ ನೀನು ಆಕಾಶದೆತ್ತರಕ್ಕೆ
ಕಳಿಸುವವು ಅವೆ ಫ್ರಿಯತಮನ ಹತ್ತಿರಕ್ಕೆ.



ನಾವೆಲ್ಲರೂ ಕೈದಿಗಳು.
ಕೆಲವರಿಗೆ ಕಿಟಕಿಗಳಿರುವ ಕೋಣೆಗಳಿವೆ
ಮತ್ತೆ ಕೆಲವರಿಗೆ ಕಿಟಕಿಗಳಿಲ್ಲದ್ದು.



ಕೈಲಾಸ ಪರ್ವತದ ಬಗಗೆ ಕೇಳಿರಬೇಕು ನೀವು.

ಅತಿ ಎತ್ತರದ ಪುಣ್ಯ ಪರ್ವತ.

ಒಮ್ಮೆ ಅದನು ಏರಿದರೆ
ಉಳಿವ ಏಕೈಕ  ಆಕಾಂಕ್ಷೆ
ಕೆಳಗಿಳಿದು ಕಣಿವೆಯಲ್ಲಿ ಬದುಕುವ
ಜನರೊಂದಿಗೆ ಬದುಕ ಬೇಕೆಂಬುದು.


ಖಲೀಲ್ ಗಿಬ್ರಾನ್
ಅನುವಾದ ದಿಗ್ವಿಜಯ.

2 comments: