Sunday, August 30, 2015

ನೇಪಾಳ ಭೂಕಂಪದ ಸಂದಭ೯

ಎಲ್ಲವೂ ಕ್ಷಣದಲ್ಲಿ ಮಾಯವಾದಾಗ
ಬದುಕು ಚಣದಲ್ಲಿ ಬಯಲಾದಾಗ
ನಿಂತ ನೆಲವೇ ಬಾಯ್ ತೆರೆದು
ಬದುಕ ಕುಲುಕಿ ಬೆದರಿಸಿದಾಗ
ಆಗ ಆಗ ಆಗ

ಕ್ಯಾಮರಾ ಒಂದು ಎದುರು ಬಂದು
ನಿಮಗೆ ಏನು ಅನ್ನಿಸ್ತು ಕೇಳಿದರೆ
ಹೇಳುವುದು ಏನು ?

ವಾರ ಆಯಿತು ತಾಯಿ, ಅನ್ನ ಕಂಡಿಲ್ಲ
ಸೂರಿಲ್ಲ, ನೀರಿಲ್ಲ, ಮಗನ ಮುಖ ಕಂಡಿಲ್ಲ ...

ಹೇಳಲೇನಿದೆ ಉಳಿದದ್ದೇನು ಮುರಿದ ಮನ, ಮನೆ.
ದೂರು ಹೇಳ ಬೇಕೇ ?
ಮನೆ ಬಿದ್ದಿದೆ ಸ್ವಾಮೀ  ನಮ್ಮ ತಾತ ಮುತ್ತಾತ ಕಟ್ಟಿದ ಮನೆ,
ಇತಿಹಾಸವಿಲ್ಲದ ಭವಿಷ್ಯ ಭಯಾನಕ

ಚಿತ್ರ ಅಂತಜಾ೯ಲದ  ಕೃಪೆ

No comments:

Post a Comment