Wednesday, December 27, 2017

ಹೊಸ ಹಾಡು!

ನೀನು ಅಲ್ಲಿ ದೂರದಲ್ಲಿ ದೊಡ್ಡ ವೇದಿಕೆಯ ಮೇಲೆ ನಿಂತು
ನಮ್ಮ ನೋಡುವೆ, ಕಣ್ಣು ಚಿಕ್ಕದಾಗಿಸಿ, ಕಪ್ಪು ಕನ್ನಡಕದೊಳಗೇ!

ನಾವು ಎದೆಸಟೆದು, ಉತ್ಸಾಹಿತರಾಗಿ ಗಟ್ಟಿನಿಂತಿದ್ದೇವೆ
ನಿನ್ನ ಮುಂದೆಯೇ, ಆದರೆ ನಿನ್ನ ಕಪ್ಪು ಗಾಜಿನ ಅಸ್ಪಷ್ಟ ದೃಷ್ಟಿಗೆ ನಾವು ಇನ್ನೂ ಕಂಡಿಲ್ಲ, ಅಥವಾ ಕಂಡರೂ ನೀ ತೋರಗೊಡುತ್ತಿಲ್ಲ!

ನಿನ್ನ ಬಹುಪರಾಕಿನ ಗುಯ್ ಇನ್ನೂ ನಿನ್ನ ಕಿವಿಯಿಂದ
ಮಾಯವಾಗಿಲ್ಲ, ಅದಕ್ಕೆ ನಮ್ಮ ಒಕ್ಕೊರಲಿನ ಘೋಷ ನಿನಗಿನ್ನೂ ಕೇಳುತ್ತಿಲ್ಲ!

ಸೌಹಾರ್ದ ಬದುಕಿನತ್ತ ನಮ್ಮ ಯಾನ!

ಬೆಂದಿದ್ದೇವೆ, ನೊಂದಿದ್ದೇವೆ, ಹಳೆಯ ನೆನಪು ಇನ್ನೂ ಮಾಸಿಲ್ಲ, ಅವಮಾನಗಳ ಗಾಯ ಗುಣವಾಗುತ್ತಿವೆ,
ಮತ್ತಷ್ಟು ಗಟ್ಟಿಯಾಗಿ ಕೂಗುತ್ತಿದ್ದೇವೆ!

ಸಮಾನತೆಯ, ಸೌಹಾರ್ದ ಬದುಕಿನತ್ತ ನಮ್ಮ ಯಾನ!

ತೆಗೆ ನಿನ್ನ ಕಣ್ಣ ಗಾಜು, ಸೂರ್ಯನ ಸ್ಪಷ್ಟ ಬೆಳಕಲ್ಲಿ
ನಿನ್ನೆದುರು ನೋಡು,
ಕೇಳಿಸಿಕೋ ಹೊಸ ಘೋಷ!

ಸೌಹಾರ್ದ ಬದುಕಿನತ್ತ ನಮ್ಮ ಯಾನ!

No comments:

Post a Comment