ನಿರ್ದೇಶಕ ಚನ್ನಕೇಶವ ಮಂಚೀಕೇರಿಯ ಮಕ್ಕಳ ಶಿಬಿರಕ್ಕಾಗಿ ಠಾಗೂರರ "ಎಕ್ಲಚೊಲೋರೆ" ಹಾಡನ್ನು ಅದೇ ಧಾಟಿಯಲ್ಲಿ ಕನ್ನಡದಲ್ಲಿ ಹಾಡಲು ಮಾಡಿಸಿದ ಕನ್ನಡ ಭಾವಾನುವಾದ. ಮೂಲ ಬಂಗಾಲಿ ಹಾಡು ಕೇಳಲಿಕ್ಕೆ ಜೊತೆಯಲ್ಲಿದೆ.
ಒಬ್ಬನೇ ನಡೆ.
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬನೇ ನಡೆ.
ಬೆಚ್ಚಿ ಭಯದಲ್ಲವರು
ಅರೆ ಓರೆ ಓ... ನಿರ್ಭಾಗ್ಯ,
ಬೆಚ್ಚಿ ಭಯದಲ್ಲವರು
ಅರೆ ಓರೆ ಓ... ನಿರ್ಭಾಗ್ಯ,
ಭಯದಲ್ಲವರು,
ಕಾಲುಕುಸಿದು ಜೀವ ಕೈಯಲ್ಲಿ ಹಿಡಿದು ಮೂಕರಾದರೆ
ನಿನ್ನ ಎದೆಯ ಬಿಚ್ಚಿ
ನೀನು ಮನದ ಮೊರೆಯ ಸಾರು ಗಟ್ಟಿ,
ಕಾಲುಕುಸಿದು ಜೀವ ಕೈಯಲ್ಲಿ ಹಿಡಿದು ಮೂಕರಾದರೆ
ನಿನ್ನ ಎದೆಯ ಬಿಚ್ಚಿ
ನೀನು ಮನದ ಮೊರೆಯ ಸಾರು ಗಟ್ಟಿ,
ಒಬ್ಬನೇ ನಡೆ.
ನಿನ್ನ ಕರೆಗವರು ಓಗೊಡದ್ದಿದ್ದರೇನು,
ನಿನ್ನ ತೊರೆದರೆ ಅವರು
ಅರೆ ಓರೆ ಓ… ಹತಾಶ ,
ಒಬ್ಬನೇ ನಡೆ.
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬನೇ ನಡೆ.
ಅರೆ ಓರೆ ಓ… ಹತಾಶ ,
ತೊರೆದರೆ ಅವರು,
ಮರೆತರೆ ಕೊನೆಯಿರದ ಕಾಳ ಕಾನನದೊಳಗೆ
ಕಲ್ಲು ಮುಳ್ಳು ಮೆಟ್ಟಿ
ನೆತ್ತರಲ್ಲಿ ನೆನೆದ ಹಾದಿ ಕಡೆದು,
ಮರೆತರೆ ಕೊನೆಯಿರದ ಕಾಳ ಕಾನನದೊಳಗೆ
ಕಲ್ಲು ಮುಳ್ಳು ಮೆಟ್ಟಿ
ನೆತ್ತರಲ್ಲಿ ನೆನೆದ ಹಾದಿ ಕಡೆದು,
ಒಬ್ಬನೇ ನಡೆ.
ನಿನ್ನ ಕರೆಗವರು ಓಗೊಡದ್ದಿದ್ದರೇನು,
ದೊಂದಿ ಹಿಡಿಯದೆ ಅವರು
ಅರೆ ಓರೆ ಓ… ಅವರು,
ದೊಂದಿ ಹಿಡಿಯದೆ,
ಒಬ್ಬನೇ ನಡೆ.
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬನೇ ನಡೆ.
ಅರೆ ಓರೆ ಓ… ಅವರು,
ದೊಂದಿ ಹಿಡಿಯದೆ,
ಸುಂಟರಗಾಳಿಯ ಇರುಳು ದಾರಿ ತೋರದಿದ್ದರೆ
ಸುಟ್ಟು ಬಿಡು
ನಿನ್ನ ಹೃದಯವನ್ನೆ ನೋವ ಮಿಂಚು ಜ್ವಾಲೆಯ ಹಚ್ಚಿ.
ಸುಟ್ಟು ಬಿಡು
ನಿನ್ನ ಹೃದಯವನ್ನೆ ನೋವ ಮಿಂಚು ಜ್ವಾಲೆಯ ಹಚ್ಚಿ.
ನಿನ್ನ ಕರೆಗವರು ಓಗೊಡದ್ದಿದ್ದರೇನು,
ಒಬ್ಬನೇ ನಡೆ.
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬಂಟಿ, ಒಬ್ಬನೇ, ಒಬ್ಬನೇ
ಒಬ್ಬನೇ ನಡೆ.
ತುಂಬಾ ಚಂದದ ಕವನ :)
ReplyDeletey have u stopped translating Gibran?it was cuming very gud...ofcourse,this is very nice.i have heard this song in Amjad ali khan saab's sarod....aaahhhh......cherishing it's memory.....
ReplyDelete