ಉಪ್ಪಿನಲ್ಲೇನೋ ಪವಿತ್ರವಾದದ್ದಿರಬೇಕು ವಿಚಿತ್ರ
ನಿನ್ನ ಕಣ್ಣೀರಿನಲ್ಲೂ ಇದೆ ಅದು
ಮತ್ತೆ ಕಡಲಿನಲ್ಲೂ.
ತಂದೆ ತಾಯಿಗಳು ಬಯಸಿ
ಮಗುವೊಂದನ್ನು
ನನ್ನ ಪಡೆದರು.
ಬಯಸಿ ನಾನು ತಂದೆ ತಾಯಿಗಳನ್ನು
ಪಡೆದೆ ಇರುಳನ್ನು
ಮತ್ತು ಕಡಲನ್ನು.
ಅಡ್ಡಿ ಎಂದುಕೊಂಡದ್ದೇ
ನಿನ್ನ ಮನೆ ಮೂಡು ಗೋಡೆಯ
ಹೊಸ ಬೆಳಕಿಂಡಿಯಾದರೆ
ಏನೆನ್ನುವೆ ನೀನು!
ಜೊತೆ ನಕ್ಕವರನ್ನು ಮರೆತು ಬಿಟ್ಟಿರಬಹುದು ನೀನು
ಜೊತೆಗೆ ಅತ್ತವರನ್ನು ಮರೆಯಲಾರೆ ಎಂದಿಗೂ.
ಅಸೂಯೆಯವ ತನಗರಿವಿಲ್ಲದಂತೆ
ನನ್ನನ್ನೇ ಹೊಗಳುತ್ತಿದ್ದಾನೆ.
ಕಲೀಲ್ ಗಿಬ್ರಾನ್ ನ ಚುಟುಕು ಪದ್ಯಗಳ ಭಾವಗ್ರಹಣ
ವಾವ್ ! ತುಂಬಾ ಚೆನ್ನಾಗಿದೆ.
ReplyDeleteಜೊತೆ ನಕ್ಕವರನ್ನು ಮರೆತು ಬಿಟ್ಟಿರಬಹುದು ನೀನು
ReplyDeleteಜೊತೆಗೆ ಅತ್ತವರನ್ನು ಮರೆಯಲಾರೆ ಎಂದಿಗೂ how true alwaa?
good ones
malathi S