ಈ ಕಡಲ ತೀರದ ಮೇಲೆ ನಡೆಯುತ್ತಿದ್ದೇನೆ ನಾನು
ಮರಳು ನೊರೆಗಳ ನಡುವೆ ಯಾವತ್ತಿಂದಲೂ
ಹೆಜ್ಜೆಗುರುತುಗಳ ಅಳಿಸಿಬಿಡುತ್ತವೆ ಸೊಕ್ಕಿದಲೆಗಳು
ಮತ್ತೆ ನೊರೆಗಳ ಊದಿಬಿಡುತ್ತದೆ ಬೀಸುಗಾಳಿ
ಆದರೆ ಉಳಿಯುತ್ತವೆ ಈ ಕಡಲೂ ತೀರವೂ
ಯಾವತ್ತಿಗೂ ಯಾವ-ಯಾವತ್ತಿಗೂ.
ಬೊಗಸೆಯೊಳಗೆ ಮಂಜು ತುಂಬಿ ಒಮ್ಮೆ ನಾನು ನಿಂತೆ.
ತೆರೆದು ಕಂಡರದೇ, ಅಗೋ, ಹುಳುವಾಗಿತ್ತು ಮಂಜು
ಬೊಗಸೆ ಮುಚ್ಚಿ ಮತ್ತೆ ತೆರೆದೆ, ಕಂಡೆಯಾ ಅದು ಹಕ್ಕಿ.
ಮತ್ತೆ ಮುಚ್ಚಿ ತೆರೆದೆ ಬೊಗಸೆ, ಆ ಶೂನ್ಯದೊಳಗೆ
ಖಿನ್ನ ಮುಖದ ಒಬ್ಬ ನಿಂತಿದ್ದ ತಲೆಕೆಳಗೆ.
ಬೊಗಸೆಯನ್ನು ಮುಚ್ಚಿ ಮತ್ತೆ ತೆರೆದೆ ಇನ್ನೊಮ್ಮೆ,
ಅಲ್ಲಿದ್ದದ್ದು ಮಂಜು ಬಿಟ್ಟರೇನೇನೂ ಅಲ್ಲ.
ಆದರಲ್ಲಿ ಅನುಪಮ ಸವಿಗಾನವೊಂದ ಸವಿದೆ.
ಬೊಗಸೆ ಮುಚ್ಚಿ ಮತ್ತೆ ತೆರೆದೆ, ಕಂಡೆಯಾ ಅದು ಹಕ್ಕಿ.
ಮತ್ತೆ ಮುಚ್ಚಿ ತೆರೆದೆ ಬೊಗಸೆ, ಆ ಶೂನ್ಯದೊಳಗೆ
ಖಿನ್ನ ಮುಖದ ಒಬ್ಬ ನಿಂತಿದ್ದ ತಲೆಕೆಳಗೆ.
ಬೊಗಸೆಯನ್ನು ಮುಚ್ಚಿ ಮತ್ತೆ ತೆರೆದೆ ಇನ್ನೊಮ್ಮೆ,
ಅಲ್ಲಿದ್ದದ್ದು ಮಂಜು ಬಿಟ್ಟರೇನೇನೂ ಅಲ್ಲ.
ಆದರಲ್ಲಿ ಅನುಪಮ ಸವಿಗಾನವೊಂದ ಸವಿದೆ.
ನಿನ್ನೆವರೆಗೂ ನನ್ನ ನಾನು
ಬದುಕೆಂಬ ವರ್ತುಲದಿ
ತಾಳ ಲಯವಿಲ್ಲದೆಯೆ
ಥರಗುಟ್ಟುತಿರುವ ಬರಿ ಒಂದು ಕಣವೆಂದು ತಿಳಿದಿದ್ದೆ
ಈಗ ತಿಳಿದಿದೆ ನನಗೆ
ನಾನೇ ಆ ವರ್ತುಲವು.
ಇಡಿಯ ಬದುಕೇ ತಾನು
ತನ್ನದೇ ತಾಳದಲಿ ಕುಣಿಯುತಿದೆ ತಿರ್ರೆಂದು ನನ್ನ ಒಳಗೇ.
ಒಂದೇ ಒಂದು ಸಲ ನನ್ನ ಬಾಯಿ ಕಟ್ಟಿದ್ದು
ಅವನು ಕೇಳಿದ ಪ್ರಶ್ನೆ "ಯಾರು ನೀನು?"
ನೆನಪು ತಾನೇ ಮಿಲನದೊಂದು ರೂಪ.
ಖಲೀಲ್ ಗಿಬ್ರಾನ್ ನ ಚುಟುಕು ಪದ್ಯಗಳ ಭಾವ್ರಹಣ
No comments:
Post a Comment