ಚಿಮ್ಮುತ್ತ, ಕುಣಿಯುತ್ತ
ಹಾರುತ್ತ ಸಾಗುವೆನು
ಬೆಳ್ಳಿ ಬೀಳಿನ ಮೇಲೆ
ಚಿಟ್ಟೆ ನಾನು...
ದೂರದೂರಿನ ಹೊಲದಲ್ಲೆಲ್ಲೋ
ನನ್ನ ಮಕ್ಕಳು-ಮರಿಮಕ್ಕಳು;
ಕೋಶದೊಳಗಡೆ ನೂಲುತ್ತ ನೋನುತ್ತ
ಕಾಯುತ್ತ ಇರುವ ಆ ತಾಣದೆಡೆಗೆ.
ರೇಷ್ಮೆಯ ಚೈತನ್ಯ ನಾನೇ ನಾನು.
ಅನೂಹ್ಯ ಅರಮನೆಯಿಂದ ಬಂದ
ಮಂಜಿನೂರಿನ ಪಯಣಿಗನು.
ಜೇಡ ಹಾಡುತ್ತಿರಲಿ ಬಿಡಿ
ತನ್ನ ಗವಿಯ ನೂಲುತ್ತ,
ಕೋಗಿಲೆ ಕುಕಿಲುತ್ತಿರಲಿ
ನನ್ನ ಕಥನ,
ನನ್ನ ಜಡ ಪುಕ್ಕಗಳ ಸವರುವಾ ಮಳೆಹನಿಯು
ಆಡುತ್ತಲಿರಲಿ ವಿಸ್ಮಯದ ಜಾರುಬಂಡಿ.
ನನ್ನ ಮಾಂಸದುಂಡೆಗಳನ್ನು
ಹೃದಯದೊಳಗಿನ ಬಿಸಿ ರಕ್ತದಲ್ಲದ್ದಿ
ಕತ್ತಲಲ್ಲಿ ಕೂತು ಪ್ರಾರ್ಥಿಸುತ್ತೇನೆ;
ಕಾಲಕೊಟ್ಟ ಎರಡು ಬಿಳಿ ರೆಕ್ಕೆಗಳಿವೆ
ಕೋಶದೊಳಗೆ ಕಾದಿರುವ ಜಡ ಸ್ಥಿತಿಯಲ್ಲಿ.
ಈಗ.
ಈಗ ನಾನು,
ನೀರ ಹರಿವಿನ ದುಃಖವನ್ನು,
ನಕ್ಷತ್ರ ಹೆಣೆದ ಜಮಖಾನವನ್ನು,
ಕೊರಕಿನಲ್ಲಿ ಸುಂಯ್ಗುಡುವ ಗಾಳಿ ಹುಯಿಲನ್ನು,
ಜೇನ್ನೊಣದ ಹಾಡಿನ ಮರ್ಮರವನ್ನು
ಅರ್ಥಮಾಡಿಕೊಳ್ಳುತ್ತೇನೆ.
ಯಾಕೆಂದರೆ,
ನಾನು --
ಸಾವು ಮತ್ತು ಸೌಂದರ್ಯ!
ಫ್ರೆಡರಿಕೊ ಗಾರ್ಸಿಯಾ ಲೋರ್ಕ.
ಲೋರ್ಕಾ ಪ್ರಬುದ್ಧ ಕವಿ, ನಾಟಕಕಾರ ಮಾತ್ರವಲ್ಲದೆ ಸಂಗೀತಗಾರನೂ ಹೌದು.
1936ರಲ್ಲಿ ಗ್ರ್ಯಾನಾಡದಲ್ಲಿ ನ್ಯಾಷಲಿಸ್ಟ್ ಪಕ್ಷದ ಬೆಂಬಲಿಗರು ಅವನನ್ನು ಗುಂಡಿಟ್ಟು ಕೊಂದರು
ಎಂಬುದು ಕಳೆದ ದಶಕಗಳಲ್ಲಿ ಖಾತ್ರಿಯಾದದ್ದು.
ಇದು ಅವನು ಬರೆದ 'ದಿ ಬಟರ್ ಪ್ಲೈಸ್ ಈವಿಲ್ ಸ್ಪೆಲ್' ನಾಟಕದ ಸಾಲುಗಳ ಭಾವಾನುವಾದ.
aaahhh....superb dude
ReplyDelete