Monday, March 26, 2012

ಅಂತ್ಯ



ಸ್ಯಾಮುಯೆಲ್
ಬೆಕೆಟ್
ಡಿ= ಡೈರೆಕ್ಟರ್
= ಅಸಿಸ್ಟೆಂಟ್
ಪಿ= ಪ್ರೊಟಗನಿಸ್ಟ್ (ನಾಯಕ)
ಎಲ್= ಲ್ಯೂಕ್. ಬೆಳಕು ನಿರ್ವಾಹಕ.

ತಾಲೀಮು. ಕೊನೆಯ ದೃಶ್ಯಕ್ಕೆ ಅಂತಿಮ ರೂಪುಗಳು. ಖಾಲಿ ರಂಗ. ಮತ್ತು ಎಲ್ ಈಗಷ್ಟೆ ಲೈಟಿಂಗ್ ಸೆಟ್ ಮಾಡಿದ್ದಾರೆ. ಡಿ ಈಗಷ್ಟೇ ಆಗಮಿಸಿದ್ದಾನೆ. ಡಿ ರಂಗದ ಎಡ ಕೆಳಭಾಗದಲ್ಲಿ ಆರಾಮ ಕುರ್ಚಿಯಲ್ಲಿದ್ದಾನೆ. ಫರ್ ಕೋಟ್ ಅದಕ್ಕೆ ಹೊಂದುವ ಫರ್ ಟಕ್. ವಯಸ್ಸು ಮತ್ತು ಆಕಾರ ಅಮುಖ್ಯ.
ಡಿಯ  ಪಕ್ಕದಲ್ಲಿ ನಿಂತಿದ್ದಾಳೆ.ಪೂರ್ತಿ ಬಿಳಿ ಉಡುಪುಬಿಚ್ಚಿದ ಕೂದಲು. ಕಿವಿಯ ಮೇಲೆ ಪೆನ್ಸಿಲ್ ಇದೆ. ವಯಸ್ಸು ಆಕಾರ  ಅಮುಖ್ಯ .
ಪಿ ರಂಗದ ಮದ್ಯದಲ್ಲಿ ೧೮ ಇಂಚು ಎತ್ತರದ ಒಂದು ಕಪ್ಪು ಪೀಠದ ಮೇಲೆ ನಿಂತಿದ್ದಾನೆ. ಕಪ್ಪು ಟೊಪ್ಪಿ, ಪಾದ ಮುಟ್ಟುವ ಕಪ್ಪು ಗೌನು, ಬಾಗಿದ ತಲೆ, ಕೈಗಳೆರಡೂ ಜೇಬಿನೊಳಗೆ. ವಯಸ್ಸು ಮತ್ತು ಆಕಾರ ಅಮುಖ್ಯ.
(ಡಿ ಮತ್ತು ಪಿಯನ್ನೇ ನೋಡುತ್ತಾ ಚಿಂತಾಮಗ್ನರಾಗಿದ್ದಾರೆ. ದೀರ್ಘ ಮೌನ.)

:           (ಕೊನೆಗೂ) ಇಷ್ಟವಾಯ್ತಾ ಅವನ ಲುಕ್ಕು?
ಡಿ:           ಅಷ್ಟಕ್ಕಷ್ಟೆ. (ಮೌನ) ಯಾಕೆ ಮಣೆ?
:           ಮುಂದಿನ ಸಾಲಿನವರಿಗೂ ಪಾದ ಕಾಣಿಸ್ಲಿ ಅಂತ.
                (ಮೌನ)
ಡಿ:           ಟೊಪ್ಪಿ ಯಾಕೆ?
:           ಮುಖಮುಚ್ಕೋಳ್ಳೋಕೆ ಅನುಕೂಲ ಆಗತ್ತೆ ಅಂತ.
   (ಮೌನ)
ಡಿ:           ಮತ್ತೆ ಗೌನ್?
:           ಎಲ್ಲಾ ಕಪ್ಪಗಿರ್ಲಿ ಅಂತ.
                (ಮೌನ)
ಡಿ:           ಮೇಲ್ಗಡೆದರ ಒಳಗಡೆ ಏನು ಹಾಕ್ಕೊಂಡಿದ್ದಾನೆ ಅವನು? ( ಪಿ ಕಡೆಗೆ ಹೋಗಲಾರಂಭಿಸುತ್ತಾಳೆ)
           ಹೇಳು ಸಾಕು.
              ( ನಿಲ್ಲುತ್ತಾಳೆ)
:           ರಾತ್ರಿ ಉಡುಗೆ?
ಡಿ:           ಬಣ್ಣ?
:           ಬೂದು.
   (ಡಿ ಸಿಗಾರ್ ತೆಗೆಯುತ್ತಾನೆ.)
ಡಿ:           ಲೈಟ್. ( ಹಿಂದಿರುಗಿ, ಸಿಗಾರ್ ಹಚ್ಚುತ್ತಾಳೆ, ಸುಮ್ಮನೆ ನಿಲ್ಲುತ್ತಾಳೆ.)  ಬುರುಡೆ ಹೇಗಿದೆ?
:           ನೀವಾಗ್ಲೇ ನೋಡಿದ್ದೀರಿ.
ಡಿ:           ಮರ್ತು ಹೋಗಿದೆ. ( ಪಿಯ ಹತ್ತಿರಕ್ಕೆ ಹೋಗುತ್ತಾಳೆ.)  ಹೇಳು.
                ( ನಿಲ್ಲುತ್ತಾಳೆ.)
:           ಬೋಳಾಗಿದೆ. ಕೆಲವೇ ಕೂದ್ಲು.
ಡಿ:           ಬಣ್ಣ?
:           ಬೂದು.
               (ಮೌನ)
ಡಿ:           ಕೈ ಯಾಕೆ ಜೇಬೊಳಗಿದೆ?
:           ಕಪ್ಪಗಿರ್ಲಿಕ್ಕೆ ಸಹಾಯ ಆಗತ್ತೆ.
ಡಿ:           ಜೇಬೊಳಗಿರ್ಬಾರ್ದು.
:           ನಾನು ನೋಟ್ ಮಾಡ್ಕೋತೇನೆ. (ಪ್ಯಾಡನ್ನು, ಪೆನ್ಸಿಲ್ಲನ್ನು ಹೊರತೆಗೆದು ಬರೆದುಕೊಳ್ಳುತ್ತಾಳೆ)
               ಕೈ ಕಾಣ್ಬೇಕು.
   (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ.)
ಡಿ:            ಹೇಗಿದೆ? ( ಎಲ್ಲೋ ಇದ್ದಾಳೆ, ಕಿರಿಕಿರಿಯಾಗಿ) ಕೈಗಳು, ಕೈಗಳು ಹೇಗಿವೆ?
:           ನೀವಾಗ್ಲೇ ನೋಡಿದ್ದೀರಿ.
ಡಿ:           ನಾನು ಮರ್ತಿದ್ದೇನೆ.
:           ಮುರುಟಿದೆ. ಫೈಬರಸ್ ಡಿಜನರೇಶನ್.
ಡಿ:           ಪಂಜದ ಥರ?
:           ನಿಮಗಿಷ್ಟವಿದ್ದರೆ.
ಡಿ:           ಎರಡು ಪಂಜಗಳು?
:           ಮುಷ್ಟಿ ಬಿಗಿಯದಿದ್ದರೆ.
ಡಿ:           ಮುಷ್ಟಿ ಬಿಗಿಬಾರ್ದು.
:           ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
               ಜೋತುಬಿದ್ದ ಹಸ್ತಗಳು.
               (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ.)
ಡಿ:           ಲೈಟ್. ( ಹಿಂದಿರುಗಿ, ಸಿಗಾರ್ ಹಚ್ಚುತ್ತಾಳೆ, ಸುಮ್ಮನೆ ನಿಲ್ಲುತ್ತಾಳೆ. ಡಿ ಸೇದುತ್ತಾ) ಗುಡ್.
               ಎಲ್ಲಿ, ಒಮ್ಮೆ ನೋಡೋಣ. ( ಎಲ್ಲೋ ಇದ್ದಾಳೆ, ಕಿರಿಕಿರಿಯಾಗಿ) ಮುಂದೆ ಹೋಗ್ಲಿ. ಗೌನ್ ತೆಗಿ.
               (ಅವನು ಗಡಿಯಾರ ನೋಡುತ್ತಾ)  ಬೇಗ ಬೇಗ. ನಂದು ಪಾರ್ಟಿಮೀಟಿಂಗ್ ಇದೆ.
   ( ಪಿಯ ಹತ್ತಿರ ಹೋಗುತ್ತಾಳೆ, ಗೌನ್ ತೆಗೆದು ತನ್ನ ತೋಳಮೇಲೆ ಹಾಕಿಕೊಂಡು ಹಿಂತಿರುಗುತ್ತಾಳೆ
   ಪಿ ಸುಮ್ಮನೆ  ಒಪ್ಪಿಕೊಳ್ಳುತ್ತಾನೆಪಿ ಹಳೆಯ ಬೂದು ಪೈಜಾಮದಲ್ಲಿ ತಲೆಕೆಳಗೆ ಹಾಕಿ 
   ಮುಷ್ಟಿಬಿಗಿದು ನಿಂತಿದ್ದಾನೆ. ಮೌನ)
:            ಇಲ್ದೇನೆ ಚೆನ್ನಾಗಿ ಕಾಣ್ತಾನಲ್ವ? (ಮೌನ) ನಡುಗ್ತಿದ್ದಾನೆ.
ಡಿ:            ಎಲ್ಲಾ ಬೇಡಟೊಪ್ಪಿ.
   ( ಪಿಯ ಹತ್ತಿರ ಹೋಗಿ ಟೊಪ್ಪಿ ತೆಗೆಯುತ್ತಾಳೆ, ಕೈಯ್ಯಲಿ ಹಿಡಿದುಕೊಂಡು ಬರುತ್ತಾಳೆ. ಮೌನ.)
:            ಕಪಾಲ ಇಷ್ಟ ಆಯ್ತಾ?
ಡಿ:            ಬಿಳಿಚಿಸ್ಬೇಕು.
:            ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
               ಬಿಳಿಚಿದ ಬುರುಡೆ.
                (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ.)
ಡಿ:            ಕೈಗಳು. ( ಎಲ್ಲೋ ಇದ್ದಾಳೆ.ಕಿರಿಕಿರಿಯಾಗಿ ) ಹಸ್ತಗಳು. ಚುರುಕಾಗಿ
                ( ಪಿಯ ಹತ್ತಿರ ಹೋಗಿ ಮುಷ್ಟಿ ಸಡಿಲಿಸಿ  ಹಿಂತಿರುಗುತ್ತಾಳೆ.) 
             ಹಸ್ತಗಳನ್ನ ಬಿಳಿಚಿಸ್ಬೇಕು.
:           ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
               ಬಿಳಿಚಿದ ಹಸ್ತಗಳು.
                (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ. ಪಿಯ ಬಗ್ಗೆ ಯೋಚಿಸುತ್ತಾರೆ.)
ಡಿ:            (ಕೊನೆಗೆ) ಏನೋ ಸರಿಯಿಲ್ಲ. (ತಲೆಕೆಟ್ಟವನಂತೆ) ಏನದು?
:            (ಮೆಲುವಾಗಿ) ಒಂದುವೇಳೆ... ಒಂದುವೇಳೆ... ಅವನ ಕೈ  ಜೋಡಿಸಿದರೆ ಹೇಗೆ?
ಡಿ:            ಪ್ರಯತ್ನಿಸೋದರಲ್ಲಿ ತೊಂದರೆಯೇನೂ ಇಲ್ಲ.
                ( ಅವನತ್ತ ಹೋಗಿ ಅವನ ಕೈ ಜೋಡಿಸಿ ಹಿಂತಿರುಗುತ್ತಾಳೆ
             ಮೇಲಕ್ಕೆ.
                ( ಮುಂದೆ ಹೋಗಿ ಸೊಂ ಮೇಲಕ್ಕೆತ್ತಿ  ಜೋಡಿಸಿದ ಕೈಗಳನ್ನು  ಮೇಲಕ್ಕೆತ್ತುತ್ತಾಳೆಹಿಂತಿರುಗುತ್ತಾಳೆ)
             ಇನ್ನೊಂದು ನೂಲು ಮೇಲಕ್ಕೆ. ( ಮತ್ತೆ ಹೋಗಿ  ಜೋಡಿಸಿದ ಕೈಗಳನ್ನು ಎದೆ ಮಟ್ಟಕ್ಕೆ  ಎತ್ತುತ್ತಾಳೆ.)
                ಸಾಕು (  ಹಿಂತಿರುಗುತ್ತಾಳೆ.) ಅಡ್ಡಿಲ್ಲ. ಬರ್ತಾ ಇದೆ. ಲೈಟ್.
                ( ಹಿಂದಿರುಗಿ, ಸಿಗಾರ್ ಹಚ್ಚುತ್ತಾಳೆ, ಸುಮ್ಮನೆ ನಿಲ್ಲುತ್ತಾಳೆ. ಡಿ ಸೇದುತ್ತಾನೆ)
:            ನಡುಗ್ತಿದ್ದಾನೆ ಅವನು.
ಡಿ:            ದೇವರು ಒಳ್ಳೇದು ಮಾಡ್ಲಿ.
                (ಮೌನ)
:            (ಮೆಲುವಾಗಿ) ಒಂದುವೇಳೆ... ಒಂದುವೇಳೆ... ನಾವು ಅವನಿಗೊಂದು  ಸಣ್ಣ ಡೈಲಾಗ್?
ಡಿ:           ದೇವರೇ! ವಿವರಣೆ ಕೊಡೋ ಹುಚ್ಚು! ಸಾಯೋವರೆಗೆ  ಇಡೋ ಸಣ್ಣ ಚುಕ್ಕೆಗೂ, ಎಲ್ಲದಕ್ಕು!
            ಸಣ್ಣ ಡೈಲಾಗ್ದೇವ್ರೇ!
:           ಅವನು  ಮಾತಾಡಲ್ಲ ಅನ್ನೋದು ಗ್ಯಾರಂಟಿಯಾ?
ಡಿ:           ಬಿಕ್ಕೋದೂ ಇಲ್ಲ. ( ,ತ್ತೆ ಗಡಿಯಾರ ನೋಡಿಕೊಳ್ಳುತ್ತಾನೆ.) ಸಮಯ ಆಗ್ತಿದೆ. ನಾನು ಹೋಗಿ   
           ಆಡಿಟೋರಿಯಂನಿಂದ ಹೇಗೆ  ಕಾಣತ್ತೆ ಅಂತ  ನೋಡ್ತೇನೆ. ( ಡಿ ನಿಷ್ಕ್ರಮಣಮತ್ತೆ ಕಾಣಿಸಿಕೊಳ್ಳುವುದಿಲ್ಲ
           ಎ ಅವನ  ಆರಾಮ ಕುರ್ಚಿಯಲ್ಲಿ ಕೂತವಳು ತಟ್ಟನೆ  ಜಿಗಿದು ನಿಲ್ಲುತ್ತಾಳೆ, ಬಟ್ಟೆಯ  ತುಂಡೊಂದರಲ್ಲಿ 
                ಕುರ್ಚಿಯನ್ನು  ಉಜ್ಜಿ ಉಜ್ಜಿ  ಒರೆಸಿ  ಕೂರುತ್ತಾಳೆ. ಮೌನ )
ಡಿ:           (ಹೊರಗಿನಿಂದ, ಬೇಸರದಲ್ಲಿ. ) ಕಾಲು  ಬೆರಳುಗಳು ಕಾಣಿಸ್ತಿಲ್ಲ. (ಕಿರಿಕಿರಿಯಾಗಿ)
            ಮುಂದಿನ ಮೊದಲನೇ  ಸಾಲಲ್ಲಿ ಕೂತಿದ್ದೇನೆ ನಾನು. ಕಾಲ್ಬೆರಳುಗಳು ಕಾಣಿಸೋಲ್ಲ.
:          (ಮೇಲೇಳುತ್ತಾ)  ನೋಟ್ ಮಾಡ್ಕೋತೇನೆ. (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
              ಮಣೆಯನ್ನು ಎತ್ತರಿಸುವುದು.
              (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ.)
ಡಿ:          ಅಲ್ಲೊಂದು ಮುಖದ ಗುರುತಿದೆ.
:           ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
ಡಿ:           ತಲೆ ತಗ್ಗಿಸು. ( ಎಲ್ಲೋ ಇದ್ದಾಳೆ,ಕಿರಿಕಿರಿಯಾಗಿ) ಮುಂದುವರೀಲಿ. ಅವನ ತಲೆ ತಗ್ಗಿಸು. 
               ( ಪ್ಯಾಡ್ ಕೆಳಗಿಟ್ಟು ಪಿ  ಬಳಿ ಹೋಗಿ ಅವನ ತಲೆಯನ್ನು ಇನ್ನೂ ತಗ್ಗಿಸಿ ಹಿಂತಿರುಗುತ್ತಾಳೆ)
                ಒಂದು ಕೂದ್ಲಷ್ಟು ಕೆಳಗೆ( ಪಿಯ ಬಳಿಗೆ ಹೋಗಿ ಇನ್ನೂ ತಗ್ಗಿಸುತ್ತಾಳೆ.)
             ನಿಲ್ಲಿಸು ( ಹಿಂತಿರುಗುತ್ತಾಳೆ) 
             ಗುಡ್  ಬರ್ತಾ ಇದೆ. (ಮೌನ) ಸ್ವಲ್ಪ ಜಾಸ್ತಿ ಬೆತ್ತಲೆ ಮಾಡ್ಬಹುದು.
:           ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆಯುವಷ್ಟರಲ್ಲಿ)                
ಡಿ:           ಮುಂದೆ ಹೋಗ್ಲಿ… ಮುಂದ್ಹೋಗ್ಲಿ!
               ( ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆಪಿಯ ಕಡೆಗೆ ಹೋಗಿ ಏನೂ ತೋಚದೆ ನಿಲ್ಲುತ್ತಾಳೆ.) 
            ಕುತ್ತಿಗೆ ಕಾಣೋ ಹಾಗ್ಮಾಡು.
               ( ಪಿಯ ಬಳಿ ಹೋಗಿ ಮೊದಲ ಗುಂಡಿ ಬಿಚ್ಚಿ  ಕಾಲರ್ ಬಿಡಿಸಿ ಹಿಂತಿರುಗುತ್ತಾಳೆ) 
  ಕಾಲುಮೊಣಕಾಲು.
   (  ಪಿಯ ಬಳಿ  ಹೋಗಿ ಪೈಜಾಮದ ಒಂದುಕಾಲನ್ನು ಮೊಣಕಾಲಿನವರಗೆ ಮಡಚುತ್ತಾಳೆ)  
   ಮತ್ತೊಂದು(ಇನ್ನೊಂದು ಕಾಲು  ಮಡಚಿ  ಹಿಂತಿರುಗುತ್ತಾಳೆ)  ಮೇಲಕ್ಕೆ. ಮೊಣಕಾಲು. 
   ( ಪಿಯಬಳಿ ಹೋಗಿ  ಮೊಣಕಾಲಿನ ಮೇಲಿನವರೆಗೆಎರಡನ್ನೂ ಮಡಚುತ್ತಾಳೆ,ಹಿಂತಿರುಗುತ್ತಾಳೆ.) 
   ಮತ್ತೆ ಬಿಳಿಚಿಸಬೇಕು.
:           ನೋಟ್ ಮಾಡ್ಕೋತೇನೆ (ಪೆನ್ಸಿಲ್ ಮತ್ತು ಪ್ಯಾಡ್ ತೆಗೆದು ಬರೆಯುತ್ತಾಳೆ.)
               ಎಲ್ಲ ಮಾಂಸಗಳನ್ನೂ ಬಿಳುಚಿಸು.
               (ಪ್ಯಾಡ್ ಪೆನ್ಸಿಲ್ ಒಳಗಿಡುತ್ತಾಳೆ.)
ಡಿ:           ಬರ್ತಾ ಇದೆ. ಲ್ಯೂಕ್ ಇದ್ದಾನಾ?
:           (ಕರೆಯುತ್ತಾ) ಲ್ಯೂಕ್! (ಮೌನ, ಜೋರಾಗಿ) ಲ್ಯೂಕ್!
ಎಲ್:       (ಹೊರಗಿಂದ, ದೂರದಲ್ಲಿ) ಕೇಳಿಸ್ತಿದೆ. (ಮೌನ, ಹತ್ತಿರ ಬಂದು) ಏನು ತೊಂದ್ರೆ  ಇವಾಗ?
:           ಲ್ಯೂಕ್ ಇಲ್ಲಿದ್ದಾನೆ.
ಡಿ:           ಬ್ಲ್ಯಾಕೌಟ್ ಮಾಡು.
ಎಲ್:        ಏನು?
   ( ಅವನಿಗೆ ತಾಂತ್ರಿಕ ಸನ್ನೆಗಳಲ್ಲಿ ಹೇಳುತ್ತಾಳೆ. ಜನರಲ್ ಲೈಟ್  ಫೇಡೌಟ್.
   ಪಿ   ಮೇಲೆ ಮಾತ್ರ ಬೆಳಕು ಇದೆ. ಕತ್ತಲೆಯಲ್ಲಿದ್ದಾಳೆ.)
ಡಿ:           ತಲೆಗೆ ಮಾತ್ರ.
ಎಲ್:       ಏನು?
  ( ಅವನಿಗೆ ತಾಂತ್ರಿಕ ಸನ್ನೆಗಳಲ್ಲಿ ಹೇಳುತ್ತಾಳೆ.
  ಪಿಯ ದೇಹದ ಮೇಲಿನ ಲೈಟ್ ಫೇಡೌಟಾಗಿ ಅವನ ತಲೆಯ   ಮೇಲೆ ಮಾತ್ರ ಬೆಳಕು ಉಳಿಯುತ್ತದೆ
  ಮೌನ)
ಡಿ:           ಸುಂದರ.
               (ಮೌನ)
:           (ಮೆಲ್ಲಗೆ) ಒಂದು ವೇಳೆ...  ಒಂದುವೇಳೆ...ತಲೆ ಎತ್ತಿದ್ರೆ... ಒಂದು ಕ್ಷಣ...
            ಒಂದೇ ಒಂದು ಕ್ಷಣ ಮುಖ ತೋರಿಸಿದ್ರೆ...
ಡಿ:           ದೇವ್ರೇಆಮೇಲೆ? ತಲೆ ಎತ್ತೋದುಎಲ್ಲಿ ಇದ್ದೇವೆ ಅನ್ಕೊಂಡಿದ್ದೀಯ ನಾವಿವಾಗ?
               ಪೆಟಗೋನಿಯಾದಲ್ಲಾ? ತಲೆ  ಎತ್ತೋದು? ದೇವರೇ
               (ಮೌನ) ಗುಡ್. ಇಲ್ಲಿದೆ ನಮ್ಮ ಅಂತ್ಯ. ಅಂಗೈಯ್ಯಲ್ಲಿ. ಒನ್ಸ್ ಮೋರ್... 
            ಮತ್ತೆ ನನ್ಕೆಲ್ಸ ಮುಗೀತು.
:           (ಎಲ್ ಗೆ) ಇನ್ನೊಂದು ಸಲ. ಆಮೇಲೆ ಅವರಿರಲ್ಲ.
   (ಪಿ ಮೇಲೆ ಬೆಳಕು ಫೇಡಪ್ ಆಗುತ್ತದೆ. ಮೌನ. ಜನರಲ್ ಲೈಟ್ ಫೇಡಪ್ ಆಗುತ್ತದೆ.)
ಡಿ:            ನಿಲ್ಸು! (ಮೌನ) ಈಗ... ಆನಂದಿಸ್ಲಿ ಅವರು.
               (ಜನರಲ್ ಲೈಟ್ ಫೇಡೌಟಾಗುತ್ತದೆ. ಮೌನ. ಪಿಯ ಮೇಲಿನ ಬೆಳಕೂ ಫೇಡೌಟಾಗುತ್ತದೆ
            ಪಿಯ ತಲೆಯ ಮೇಲೆ ಮಾತ್ರ ಬೆಳಕು. ದೀರ್ಘ ಮೌನ)
            ಅದ್ಭುತ! ಅದ್ಭುತ! ನೋಡುಗರನ್ನು  
            ತುದಿಗಾಲ ಮೇಲೆ ನಿಲಿಸ್ತಾನೆ ಅವನು. ಭಯಂಕರ ಚಪ್ಪಾಳೆ ಇಲ್ಲಿಯವರೆಗೂ ಕೇಳಿಸುತ್ತೆ ನನಗೆ.
   (ಮೌನ.ದೂರದಿಂದ ಚಪ್ಪಾಳೆಯ ಮಹಾಪೂರ. ಪಿ ತಲೆಯೆತ್ತುತ್ತಾನೆ, ಪ್ರೇಕ್ಷಕರನ್ನು ದಿಟ್ಟಿಸುತ್ತಾನೆ
   ಚಪ್ಪಾಳೆ  ಕ್ಷೀಣವಾಗುತ್ತದೆ, ನಿಲ್ಲುತ್ತದೆ. ದೀರ್ಘಮೌನ. ಪಿಯ ಮುಖದ ಮೇಲಿನ ಬೆಳಕೂ 
   ಫೇಡೌಟಾಗುತ್ತದೆ.)



.................................................

1 comment: