ನಾನು ನೀನಾಸಮ್ ನಲ್ಲಿ ಕಲಿಯುತ್ತಿದ್ದಾಗ ಕೂಡಿಯಾಟ್ಟಮ್ ಬಗ್ಗೆ ಕೇಳಿ ತುಂಬಾ ಆಕರ್ಷಿತನಾಗಿದ್ದೆ. ಅದಾದ ಮೇಲೆ ಬಹಳ ವರ್ಷಗಳ ನಂತರ ಹೆಗ್ಗೋಡಿನಲ್ಲಿ ಮತ್ತೊಮ್ಮೆ ಕೂಡಿಯಾಟ್ಟಮ್ನ ಪ್ರದರ್ಷನ ನಡೆದಿತ್ತು ಅದನ್ನು ನೋಡಿದ ಮೇಲೆ ಮತ್ತೆ ಅದನ್ನು ಕಲಿಯುವ ಆಸೆ ಕೆರಳಿತ್ತು. ಅವರ ವೇಷ, ಮುಖವರ್ಣಿಕೆ, ಮಿಳಾವ್ ಇವೆಲ್ಲಾ ನನ್ನನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತಿತ್ತು. ಮಿಳಾವ್‌ನ ಬಡಿತವಂತೂ ...
ವಾಲಿವಧಾಂಕಮ್. ವಾಲಿ; ಅಮ್ಮನ್ನೂರ್ ಮಾಧವ ಚಾಕ್ಯಾರ್, ಅಂಗಧ; ಪೊತಿಯಿಲ್ ನಾರಾಯಣ ಚಾಕ್ಯಾರ್, ಸುಗ್ರೀವ;ಅಮ್ಮನ್ನೂರ್ ಕುಟ್ಟನ್ ಚಾಕ್ಯಾರ್.
ನಾನು ಆಣ್ಣನ ಚಿಕಿತ್ಸೆಗಾಗಿ ಕೆಲಕಾಲದಿಂದ ಕೇರಳದಲ್ಲಿದ್ದೇನೆ. ಅಣ್ಣನ ಗೆಳೆಯರಾದ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅಭಿನಯ ಎಂಬ ಸಂಸ್ಥೆಯ ರೂವಾರಿಗಳಾದ ರಘುತ್ತಮನ್ ಅವರು ಆಗಾಗ ಮನೆಗೆ ಬಂದು ಗಂಟೆಗಟ್ಟಲೆ ರಂಗಭೂಮಿಯ ಬಗ್ಗೆ ಮಾತಾಡಿ ಹೋಗುತ್ತಿದ್ದರು. ಅವರೂ ಕೂಡ ಕೂಡಿಯಾಟ್ಟಮ್ ಕಲಿಯುವ ಬಗ್ಗೆ ಬಹಳ ಆಸಕ್ತಿವುಳ್ಳವರು. ಅವರು ವಾಲಿವಧಾಂಕಮ್ ಎಂಬ ಕೂಡಿಯಾಟ್ಟಮ್ ನ ವಿಡಿಯೋ ಅನ್ನು ಸಹ ತಂದು ಕೊಟ್ಟಿದ್ದರು. ಕೂಡಿಯಾಟ್ಟಮ್ ಅನ್ನು ಬಹಳ ಹತ್ತಿರದಿಂದ ನೋಡಿದವರು ಅವರು. ನಮಗೆ ಕೂಡಿಯಾಟ್ಟಮ್ ಕಲಿಯುವದರ ಬಗ್ಗೆ ಅವರಲ್ಲಿ ಕೇಳಬೇಕು ಅಂತ, ಆದರೆ ಕೂಡಿಯಾಟ್ಟಮ್ ಹಾಗೆ ಹೊರಗಿನವರಿಗೆಲ್ಲಾ ಹೇಳಿಕೊಡಲಿಕ್ಕಿಲ್ಲ ಎಂಬ ನಮ್ಮದೇ ತರ್ಕದ ಜೊತೆ ವರ್ಷಗಳನ್ನೇ ಕಳೆದೆವು. ಈ ಸಲ ಅವರೊಡನೆ ಮಾತಾಡುತ್ತ ಈ ವಿಷಯವನ್ನು ಎತ್ತಿದಾಗ ಅವರು ಆ ಬಗ್ಗೆ ವಿಚಾರಿಸುವುದಾಗಿ ಹೇಳಿದ್ರು. ಅದಾಗಿ ಎರಡು ದಿನದಲ್ಲಿ ಅವರೇ ಫೋನಾಯಿಸಿ ಗುರುಗಳೊಂದಿಗೆ ಮಾತಾಡಿದ್ದೇನೆ, ನಿನ್ನ ಜೊತೆಗೆ ನಾನು ಕಲಿಯುತ್ತೇನೆ ಅಂದ್ರು.. ಬಾನುವಾರ ಸಂಜೆ ೪ ಗಂಟೆಗೆ ಅವರ ಮನೆಗೆ ಹೋಗೋಣ ಅಂತಂದ್ರು.
ನಮ್ಮ ಗುರುಗಳು ಮಾರ್ಗೀ ಕೂಡಿಯಾಟ್ಟಮ್ ಕೇಂದ್ರದ ಈಗಿನ ಮುಖ್ಯ ಗುರುಗಳು. ಕೂಡಿಯಾಟ್ಟಮ್ ಅನ್ನು ಎಲ್ಲರಿಗೂ ಕಲಿಯಲು ಅವಕಾಶ ಮಾಡಿಕೊಟ್ಟ, ಮಹಾನ್ ನಟ, ಗುರು ಅಮ್ಮನ್ನೂರು ಮಾಧವ ಚಾಕ್ಯಾರರ ಹತ್ತಿರದ ಸಂಬಂದಿಯೂ ಅವರ ಶಿಷ್ಯರೂ. ಅವರು ತಮ್ಮ ಹದಿನಾಲ್ಕನೆಯ ವಯಸ್ಸಿನಿಂದಲೇ ಕಲಿಕೆ ಆರಂಭಿಸಿ ಮಾರ್ಗಿಯ ಆರಂಭದಿಂದಲೆ ಅದರೊಂದಿಗೆ ಇರುವವರು. ಅವರ ತಂದೆಯವರೂ ಕೂಡ ಇದೇ ಕೇಂದ್ರದಲ್ಲಿ ಗುರುಗಳಾಗಿದ್ದವರು. ಕೂಡಿಯಾಟ್ಟಮ್ ನಲ್ಲಿ ಬಹಳ ಅನುಭವ ಇರುವವರು.
ಭಾನುವಾರ ಸಂಜೆ ೩ಗಂಟೆಗೆಲ್ಲಾ ಮನೆಗೆ ಬಂದ ರಘುತ್ತಮನ್ ಪಂಚೆ ಉಡ್ಬೇಕು, ವೀಳ್ಯದೆಲೆ, ಅಡಿಕೆ, ಗುರುದಕ್ಷಿಣೆ ಅಂತೆಲ್ಲಾ ಹೇಳಿ, ತಾವೆ ಎಲ್ಲದರ ಹೊಣೆಹೊತು ನನ್ನನ್ನು ಕರೆದುಕೊಂಡು ಹೋದರು. ನಮ್ಮಿಬ್ಬರ ಜೊತೆ ಅವರ ತಂಡದ ಮತ್ತೊಬ್ಬ ನಟ ಶ್ರೀನಿವಾಸ ಎನ್ನುವವರೂ ಕಲಿಯಲು ಸೇರಿಕೊಂಡರು. ದೇವಸ್ತಾನದ ಹತ್ತಿರ ಸಣ್ಣದೊಂದು ಮನೆ. ಒಳಹೋದಾಗ ಎರಡು ಸಣ್ಣ ಹುಡುಗಿಯರಿಗೆ ಪಾಠ ಮಾಡುತ್ತಿದ್ದವರು ಸ್ವಲ್ಪ ಕಾಯಬೇಕಾಗತ್ತೆ ಅಂದು ಪಾಠ ಮುಂದುವರಿಸಿದರು.
ಕೋಣೆಯ ಗೋಡೆಯ ತುಂಬೆಲ್ಲಾ ಕೂಡಿಯಾಟ್ಟಮ್ ವೇಷಗಳ ಫೋಟೊಗಳು, ಮಂಚದ ಪಕ್ಕದಲ್ಲಿ ಸಣ್ಣದೊಂದು ಮಿಳಾವ್, ಅವರ ತಂದೆಯ ಒಂದು ಫೋಟೊ ಮತ್ತೆ ಅವರ ದೊಡ್ಡಪ್ಪ ಅಮ್ಮನ್ನೂರ್ ಮಾಧವ ಚಾಕ್ಯಾರ್ ಅವರ ಫೋಟೊ ಬಿಟ್ಟೆರ ಉಳಿದದ್ದೆಲ್ಲಾ ರಾವಣ,ವಾಲಿ,ಸುಗ್ರೀವ,ರಾಮ, ವಿಧೂಷಕ...
ಗುರುಗಳು ಸುಮಾರು ೫-೩೦ರ ಹೊತ್ತಿಗೆ ಹೊರಗೆ ಬಂದು ನಮ್ಮೊಂದಿಗೆ ಕುಳಿತರು. ಅಷ್ಟೇನೂ ಎತ್ತರವೂ ಅಲ್ಲದ ಯಾವ ಆಡಂಬರವೂ ಇಲ್ಲದ ಸರಳ ವ್ಯೆಕ್ತಿತ್ವ ಅವರದು. ಪರಿಚಯದ ನಂತರ ನನ್ನಲ್ಲಿ ಮಲೆಯಾಳಮ್ ಅರ್ಥವಾಗತ್ತಾ? ನನಗೆ ಇಂಗ್ಲೀಷು ಅಷ್ಟೆಲ್ಲಾ ಬರೋದಿಲ್ಲ ಅಂದ್ರು. ನಾನು, ಹಾಗೆ ರಘು ಚೇಟ ಇದ್ದಾರಲ್ಲ ಅಂದೆ. ಕೂಡಿಯಾಟ್ಟಮ್ ನೋಡಿದ್ದೀಯಾ? ಒಂದೆರಡು ನೋಡಿದ್ದೇನೆ ಅಷ್ಟೇ ಅಂದೆ.
ಸರಿ. ಹೇಳಿ ನೀವು ನಾಟಕದವರು ನಿಮಗೆ ಅಭಿನಯದ ಬಗ್ಗೆ ಗೊತ್ತಿದೆ, ಕುಡಿಯಾಟ್ಟಮ್ ಕಲಿಯಲು ಹೊರಟಿರೋದು ಏನಕ್ಕೆ? ಅಂದ್ರೆ ಇದು ನಿಧಾನವಾಗಿ ಕಲಿಯಲಿಕ್ಕಾಗುವ, ತುಂಬಾ ಸಮಯ ಬೇಡುವ ಸಾಧನೆ. ಹೇಳಿ ನೀವು ಕೂಡಿಯಾಟ್ಟಮ್ ಆರ್ಟಿಸ್ಟ್ ಆಗ್ಬೇಕಾ? ಹಾಗಿದ್ರೆ ಕನಿಷ್ಟ ಮೂರು ವರ್ಷನಾದ್ರು ಕಲಿಬೇಕಾಗತ್ತೆ... ನೀವು ನಿಧಾನವಾಗಿ ವಿಚಾರಮಾಡಿ ಹೇಳಿ...
ರಘುಚೇಟ - ನಾವು ನಾಟಕ ಮಾಡ್ತೇವೆ, ಅಭಿನಯಿಸ್ತೇವೆ ಇದೆಲ್ಲ ನಮಗೆ ಪಾಶ್ಚಾತ್ಯರ ಕಡೆಯಿಂದ ಬಂದ ಕ್ರಮವನ್ನು ಇಟ್ಟುಕೊಂಡು. ನಮ್ಮ ಪರಂಪರೆಯಿಂದ ಬಂದಿರುವ ಕೂಡಿಯಾಟ್ಟಮ್‌ನಲ್ಲಿ ಎಲ್ಲಾ ಇದೆ. ಅಭಿನಯದ ಸೂಕ್ಷ್ಮತೆ ಇದೆ ಇದನ್ನು ನಾವು ಕಲೀಬೇಕು...
ಅದಕ್ಕವರು, ಹೀಗೂ ಮಾಡಬಹದು, ಒಂದು ಪಾತ್ರವನ್ನು ಇಟ್ಟುಕೊಂಡು ಕಲಿಯುವ. ಆಗ ನೀವು ಎಲ್ಲವನ್ನೂ ಕಲಿತಂತಾಗುತ್ತದೆ. ಕೂಡಿಯಾಟ್ಟಮ್‌ನ ಮುದ್ರೆಗಳು, ಚಾರಿಗಳು, ವಾಚಿಕ ಎಲ್ಲವೂ ಹೇಗೂ ಕಲಿಲೇಬೇಕು. ನಾನು ನಿಮಗೆ ಒಂದೆರಡು ಪಾತ್ರಗಳನ್ನ ಹೇಳ್ತೇನೆ ನೀವು ಆಯ್ಕೆ ಮಾಡಿ. ಆದರೆ ಇದಕ್ಕೂ ಸಮಯ ಬೇಕಾಗುತ್ತದೆ, ಬೇಗ ಯಾವುದೂ ಆಗಲ್ಲ ೨ ವರ್ಷ ಬೇಕಾಗ್ಬಹುದು. ಇದು ನಿಧಾನವಾಗಿ ಕಲಿಯುವ ವಿಧ್ಯೆ. ಪ್ರತಿಯೊಂದನ್ನೂ ಅಭ್ಯಾಸ ಮಾಡಿ ಮಾಡಿ ಕರಗತವಾದ ನಂತರವೇ ಮುಂದಿನ ವಿಷಯಕ್ಕೆ ಹೋಗೋದು. ಹಾಗಾಗಿ ತುಂಬಾ ತಾಳ್ಮೆ ಬೇಕು.
ನಿಮ್ಮಲ್ಲಿ ಉಸಿರಿನ ಕೆಲಸ ತುಂಬಾ ಇದಯಲ್ಲ ಅಂದ್ರೆ ಬೇರೆ ಬೇರೆ ಭಾವಕ್ಕೆ ಪ್ರತ್ಯೇಕ ಉಸಿರಾಟ ಇದ್ಯಲ್ಲ ಅದೂ ಕೂಡ ಹೇಳಿಕೊಡ್ಬೇಕು ಅಂತ ರಘು ಚೇಟ ಹೇಳಿದರು. ಅದಕ್ಕೆ ಗುರುಗಳು ಅದೆಲ್ಲ ಬೇಕಲ್ಲ. ಅಭಿನಯ ಅಂದಮೇಲೆ ಉಸಿರಿಲ್ಲದೆ ಆಗತ್ತಾ? ನಾವು ಕಲಿಯುವಾಗ ಇದೆಲ್ಲ ಏನು ಅಂತಾನೆ ಗೊತ್ತಾಗ್ತಿರ್‍ಲಿಲ್ಲ. ಆಮೇಲೆ ಪಾತ್ರ ಮಾಡ್ತಾ ನಿಧಾನವಾಗಿ ಗೊತ್ತಾಗ್ತಾ ಬಂತು. ಉಸಿರಿನ ಸಣ್ಣ ಬದಲಾವಣೆ ಇಡೀ ಬಾವವನ್ನೇ ಬದಲಿಸಿ ಬಿಡತ್ತೆ. ಅದೆಲ್ಲ ನೋಡೋಣ. . ಈ ಅನುಭವ ಆಗೋದು ನಟನಿಗೂ ಪ್ರೇಕ್ಷಕನಿಗೂ ಕ್ಷಣ ಮಾತ್ರ. ಆ ಕ್ಷಣವೇ ನಟನ ಮತ್ತು ಪ್ರೇಕ್ಷಕನ ಹುಡುಕಾಟ.
ಇವತ್ತು ಮೊದಲ ದಿನ. ದೇವರಿಗೆ ದೀಪ ಹಚ್ಚಿ ಶುರು ಮಾಡೋಣ ಎಂದು ದೀಪ ಹಚ್ಚಿ ಒಳಕೋಣೆಗೆ ಕರೆದು ಕೊಂಡು ಹೋದರು.
ದಿಗ್ವಿಜಯ
......
......

No comments:
Post a Comment