Friday, November 13, 2015

ಹಲೋ !

ಹಲೋ,
ಹೇಗಿದ್ದೀ?
ಒಮ್ಮೆ ಸಿಗು?
ಕಳೆದ ವರುಷಗಳ ಮರು ಸವಿದು
ಬರುವ ವರುಷಕ್ಕೆ ಹೊಸತಾಗಿ
ಸಜ್ಜಾಗಬೇಕಿದೆ.

ಸಾರಿ ಸಾರಿ ಕೇಳಬೇಕೆಂದಿರುವೆ
ಕ್ಷಮೆ ಇರಲಿ, ನಿನ್ನ ಹೃದಯಕ್ಕೆ
ಘಾಸಿ ಮಾಡಿದ್ದಕ್ಕೆ, ಆಗಿರದಿದ್ದರೂ...

ನಾ ನೊಂದಿದ್ದೇನೆ, ಬೆಂದಿದ್ದೇನೆ,
ನಿಟ್ಟಿಸುರಿಟ್ಟು ನೆನಪ ಚೀಲ ಬಿಟ್ಟಿದ್ದೇನೆ!

ಹಗುರಾಗಿ ಹೊಸದಾಗಿ ಮತ್ತೆ
ಬಾಳ ಕಲಿಯಲು ಹೊಸ ಚೀಲ
ಬೆನ್ನಿಗೇರಿಸಿ, ಹೊಸ ನೆನಪ ತುಂಬಲು
ಕಾದಿದ್ದೇನೆ...

ಹೆಲೋ
ಇಷ್ಟನ್ನ ನಿನಗೆ ಹೇಳಬೇಕಿತ್ತು
ಹಳೆಯ ತಪ್ಪುಗಳೇ
ಹೊಸ ಬದುಕಿಗೆ
ದಾರಿ, ದೀಪ!

No comments:

Post a Comment