Friday, November 13, 2015

ಕವನಗಳು

ಒತ್ತಾಯದ ಹೇರಿಕೆಯಿಂದ ಏನು ಬಂತು?
ಹೆದೆ ಎಳೆದಷ್ಟೂ ಇಂಬು ಅಂಬಿಗೆ ಗಮ್ಯ ತಲುಪಲು!

ಕನ್ನಡಿಯನ್ನೇ ಬದಲಿಸ ಹೊರಟರೆ
ನಿನ್ನ ಆತ್ಮವ ನೋಡುವ ಬಗೆ ಎಂತು?

ನಮ್ಮ ನಾಡು ಸಾಮಾನ್ಯವಲ್ಲ
ಬಸವ, ಅಕ್ಕ , ಷರೀಫರಿದ್ದ,
ದೇವರನ್ನೇ ತನ್ನಡೆಗೆ ತಿರುಗಿಸಿದ ದಾಸರಿದ್ದ
ಕರುನಾಡು, ಕರುಣಾಳು ನಾಡು .


ಏನಿದೆ ಮನಸಿನಲಿ?
ಮಾತು ಮಾತಿಗೂ ಅಥ೯
ಅಪಾಥ೯ಗಳ ಕಟ್ಟಿ ಚಂದ ನೋಡುವ
ವಿಕಟ ಮನದಾಸೆಯೋ?

ಕಣ್ಣಿದುರಿನ ಬದುಕ ಕಾಣಬಾರದೇ
ಶತಮಾನದ ಹಳೆ ಹೆಣವ ಹೊರ ತರುವುದೇಕೆ?
ಏನಾದರೂ ಬೇಕು ಅಮಲು
ಧಮ೯, ಕಾಮ, ರಾಮ ರಾಮಾ...
ಕೃಷ್ಣ ಎನಬಾರದೇ ನಾಲಿಗೆ.....

- ವಿಜಯ

No comments:

Post a Comment