Thursday, December 17, 2015

ಪ್ರಾಥ೯ನೆ

ಕಲಿಸು,
ನಮ್ಮ ನಾಡ ಹಾಡ,
ನಮ್ಮ ಬದುಕ ಪಾಡ,
ನಮ್ಮ ಇತಿಹಾಸವ, ಅದರ ಶಕ್ತಿಯ,
ಹಾಗಾಗಿ ಅವರು ಭವಿಷ್ಯದ ಸೊಬಗನ್ನು ಸವಿದಾರು!

ನಮ್ಮ ನಾಳೆಯ ಕಣ್ಣವರು!
ನಮ್ಮ ನಂಬಿಕೆ ಮತ್ತು ಏಕತೆಯ ಬಗೆಗೆ ಅರಿವಿರಲಿ.
ಬೆವರ ಹನಿ ಬಸಿದು ದುಡಿದ ಕವಡೆ ಕಾಸಿಗೂ
ಕೂತುಣ್ಣುವ ಹಣಕ್ಕೂ ವೆತ್ಯಾಸ ಅರಿತಿರಲಿ.

ವಿಜಯದ ನಗು, ಸೋಲಿನ ಅಳುವನ್ನು ಸಮನಾಗಿ
ತೆಗೆದುಕೊಳ್ಳುವ ಶಕ್ತಿ ಇರಲಿ.

ಕಲಿಸು ಬಾಗುವುದನ್ನು.
ವಿನಯವಿರಲಿ ಹೇಳಿದ್ದ ಕೇಳುವ, ಗ್ರಹಿಸುವ, ಅರಿತು ನಡೆಯುವ ನಯವಿರಲಿ.

ಎಲ್ಲರೂ ಸತ್ಯವಂತರೂ, ಮಹಾತ್ಮರೂ ಅಲ್ಲ.
ಆದರೆ ಬರಿದೇ ಬದುಕಿ ಸತ್ತವರಲ್ಲ ಎಂಬುದೂ ತಿಳಿದಿರಲಿ.

No comments:

Post a Comment