Friday, December 18, 2015

ನಾ ನಡೆಯದ ಆ ಹಾದಿ

ಒಂಟಿ ಪಯಣಿಗ ನಾನು, ನಡೆಯುತ್ತಿದ್ದಂತೆ
ದಾರಿ ಕವಲೊಡೆದು ನಿಂತಿತ್ತಲ್ಲಿ
ದಟ್ಟ ಕಾನನದ ನಡುವಿನಲ್ಲಿ,
ಕ್ಷಮಿಸಿ ಎರಡು ಹಾದಿಯ ಮೇಲೆ
ನಡೆವೆನೆಂತು?
ದಿಟ್ಟಿಸಿದೆ ಹಾದಿಯೊಂದ ತುದಿಗಾಲ ಮೆಲೆ,
ಕತ್ತು ಎಕ್ಕಿಸಿ ದೂರ, ತಿರಗಣೆಯಲ್ಲಿ ತಿರುಗಿ
ಇಳಿಯುವ ತನಕ...

ಆಮೇಲೆ ಮತ್ತುಳಿದ ದಾರಿಯ ನಾ ಹಿಡಿದೆ,
ಒಳ್ಳೀತೇ ಹಾಗೆ ನೋಡಿದರೆ,
ಹುಲ್ಲು ಹಾಸಿನ ದಾರಿ, ಹೆಚ್ಚು ಸವೆದಿಲ್ಲ...
ಉದ್ದಕ್ಕೂ ಸುಳಿ ಸುಳಿವ ಹುಲ್ಲ ಘಮ
ನಡೆದ್ದದ್ದೇ ತಿಳಿಯಲಿಲ್ಲ...

ದಾರಿ ಹಿಡಿದು ಬಹುದೂರ ಬಂದಾಗಿದೆ, ಹಿಂತಿರುಗದಷ್ಟು!
ಮತ್ತೊಂದು ಮುಂಜಾನೆಗೆಂದು ಬಿಟ್ಟಿದ್ದ ಆ ದಾರಿಯ
ಮತ್ತೆ ಸಂಧಿಸಲೆ ಇಲ್ಲ.

ಈಗ ಹೇಳುತ್ತಿದ್ದೇನೆ,
ಎಲ್ಲಿಯೊ, ಯಾವತ್ತೊ,, ಬಹುಕಾಲದ ಹಿಂದೆ
ಕವಲುದಾರಿಯ ಮುಂದೆ ನಿಂತಿದ್ದೆ
ಹೆಚ್ಚು ನಡೆಯದ, ಸವೆಸದ ದಾರಿಯೊಂದ
ಹಿಡಿದು ಬಂದೆ.
ಮತ್ತೆ ಅದುವೇ ನನ್ನಲ್ಲಿಯ ಬದಲಾವಣೆಗೆ ಕಾರಣ!

No comments:

Post a Comment